ಸ್ವಿಸ್ ಬ್ಯಾಂಕ್ ನದೇ ಸುದ್ದಿ.
ಭಾರತದ ಅಪಾರ ಹಣ ಸ್ವಿಸ್ ಬ್ಯಾಂಕ್ ನಲ್ಲಿದೆ ಎಂದು ದೇಶವಿಡಿ ಪ್ರಚಾರವಾಗುತ್ತಿದೆ. ೨೫ ಲಕ್ಷ ಕೋಟಿ ಹಣ ಇದೆಯೆಂದು ನಾವೆಲ್ಲ ಓದುತ್ತಾ ಇದ್ದೇವೆ. ಆದರೆ ಈ ವರೆಗೆ ಬಂದಿರುವ ಸರಕಾರಗಳು ಯಾಕೆ ಹಾಗೆ ಸುಮ್ಮನೆ ಕುಳಿತ್ತಿದ್ದವು?. ಈಗ ಒಮ್ಮೆಲೇ ಆಕುರಿತು ನೆನೆಪಾದದ್ದು ಹೇಗೆ? ಮತ್ತು ಯಾವ ಪಕ್ಷಗಳು ಅಧಿಕಾರಕ್ಕೆ ಬರುತ್ತವೆಯೋ ಆವರು ಮಾತ್ರ ಹಣ ತರಬಲ್ಲರೆ? ಇತರರಿಗೆ ಸಾಧ್ಯವಿಲ್ಲವೇ? ಅದಕ್ಕಾಗಿ ಇತರ ಭಾರತೀಯರು ಏನು ಮಾಡಬಹುದು? ಎಲ್ಲಾ ರಾಜಕೀಯ ಪಕ್ಷಗಳಿಗೆ ತಲೆಯಲ್ಲಿರುವ ಒಂದೆ ಯೋಚನೆ ಈ ದೇಶವನ್ನು ಆಳುವ ಅಧಿಕಾರವನ್ನು ಅವರಿಗೆ ಯಾರೋ ಗುತ್ತಿಗೆ ಕೊಟ್ಟಿದ್ದಾರೆ ಎಂದು. ಆದರೆ ಭಾರತದ ಅಧಿಕಾರ ಸಿಂಹಾಸನ ಬಹಳ ಪವಿತ್ರವಾದದ್ದು.ಅದನ್ನು ಏರಲು ಸಾಧಾರಣ ವ್ಯಕ್ತಿಗೆ ಸಾಧ್ಯವಿಲ್ಲ ಎಂಬುದನ್ನೂ ನಮ್ಮ ನಾಯಕರು ಅರ್ಥ ಮಾಡಿಕೊಳ್ಳ ಬೇಕಾಗುತ್ತದೆ. ಅಧಿಕ್ಕರಕಾಗಿ ಹಂಬಲಿಸುವವರು ಮತ್ತು ಅ ನಿಟ್ಟಿನಲ್ಲಿ ನಮ್ಮನ್ನು ನಿರಂತರವಾಗಿ ಬೌಧ್ಧಿಕವಾಗಿ ಮೋಸಮಾಡುವವರನ್ನು ನಾವು ತಿರಸ್ಕರಿಸಬೇಕಾಗುತ್ತದೆ. ನಾವು ಎಷ್ಟು ಬೊಬ್ಬಿಟ್ಟರು ರಾಜಕೀಯ ವ್ಯಕ್ತಿಗಳಿಗೆ ನಿವೃತ್ತಿ ಇಲ್ಲ; ಅದು ಸಾಧ್ಯವೂ ಇಲ್ಲ ಎಂಬುದನ್ನೂ ಈಗಾಗಲೇ ಸಾಬೀತು ಪಡಿಸಲಾಗಿದೆ. ಆದರೆ ಯಾವುದೇ ಕ್ಷೇತ್ರದಲ್ಲಿ ಸ್ಪರ್ದಿಸುವ ಅಭ್ಯರ್ಥಿಗಳ ಅರ್ಹತೆಯನ್ನು ಗಮನಿಸುವುದು ಬಹಳ ಮುಖ್ಯ. ಈಗಿನ ವೇಗವಾಗಿ ಓಡುವ ಯುಗದಲ್ಲಿ ೫ನೆ ತರಗತಿ ೧೦ ನೆ ತರಗತಿ ಏನೇನು ಸಾಕಾಗುವುದಿಲ್ಲ. ಕನಿಷ್ಠ ಅರ್ಹತೆ ಪದವಿಯಾದರು ಬೇಕು. ಈಗ ಬಹುಶ ಅದನ್ನು ಸ್ನಾತಕೋತ್ತರ ಅಂತ ಮಾಡಿದರೂ ಸಮಸ್ಯೆಯಾಗಲಾರದು. ಇದನ್ನೆಲ್ಲಾ ಯೋಚನೆ ಮಾಡಿದರೂ ಮತ್ತೆ ಮತ್ತೆ ನಮ gaurava yutavaada saMsattannu
ಪ್ರವೇಶಿಸುವುದು ಇಂಥವರೇ ಆಗುತ್ತಾರೆ ಎನ್ನುವುದು ಖೇದಕರ . adakkimtalU hechaagi
Sunday, April 19, 2009
Subscribe to:
Post Comments (Atom)
No comments:
Post a Comment