Monday, April 13, 2009

ಮತದಾನ ನಮ್ಮ ಹಕ್ಕು. ಅದನ್ನು ಇನ್ನೊಬ್ಬರಿಗಾಗಿ ಕಳೆದು ಕೊಳ್ಳಬೇಡಿ . ಹಕ್ಕು ಚಲಾಯಿಸಿದಷ್ಟಕ್ಕೆ ನಮ್ಮ ಕೆಲಸ ಮುಗಿದಿಲ್ಲ. ನಮ್ಮ ಹಕ್ಕಿನ ಮೂಲಕ ಅವರು ಪ್ರತಿನಿಧಿಗಳದ್ದಾರಿಂದ ಮುಂದಿನ ಐದು ವರ್ಷ ನಮ್ಮ ಸಮಸ್ಯೆಗಳನ್ನು ಕೇಳುವ ಮನೋಭಾವ ಅವರಲ್ಲಿರಬೇಕು. ನಾವು ಕೂಡಾ ಮತದಾನ ಮಾಡಿದ್ದನ್ನು ಮರೆಯಬಾರದು. ಪ್ರಜಾ ಪ್ರಭುತ್ವದಲ್ಲಿ ನಮಗೆ ಯಾವತ್ತು ಹಕ್ಕಿದೆ ಎಂಬ ಅಂಶ ನಮಗೆ ಗೊತ್ತಿರಬೇಕು. ಮಾನವ ಸಂಪನ್ಮೂಲದಲ್ಲಿ ನಾವು ವಿಶ್ವದಲ್ಲೇ ಹೆಸರು ಗಳಿಸುತ್ತಿದ್ದೇವೆ. ಅದರ ಮಹತ್ತನ್ನು ಉಳಿಸಿ ವಿಶ್ವಕ್ಕೆ ನಾಯಕನಾಗಲು ಮುನ್ನಡೆಯಬೇಕಾಗಿದೆ. ಇದಕ್ಕೆ ನಮ್ಮ ಮತದಾನ ಕೂಡಾ ಬಹಳ ಅಗತ್ಯವಾಗಿರುತ್ತದೆ.

ಕೇವಲ ಪಕ್ಷ ಮಾತ್ರಾ ಮುಖ್ಯವಲ್ಲ. ಅಲ್ಲಿ ಕಣದಲ್ಲಿರುವ ಅಭ್ಯರ್ಥಿ ಮುಖ್ಯನಾಗುತ್ತಾನೆ. ಯಾಕೆಂದರೆ ಪಕ್ಷದಿಂದ ಮಾತ್ರಾ ವಿಕಾಸ ಸಾಧ್ಯವಿಲ್ಲ. ಅಲ್ಲಿರುವ ನಾಗರೀಕರು ಕೂಡ ಮುಖ್ಯರಾಗುತ್ತಾರೆ. ನಮಗೆ ಯಾವ ರೀತಿಯ ಬೆಳವಣಿಗೆ ಬೇಕೆಂಬುದನ್ನು ನಾವೇ ತಿರ್ಮಾನಿಸಬೇಕಾಗಿರುವುದರಿಂದ ನಮ್ಮ ಅಗತ್ಯ ಯಾವತ್ತು ಇರುತ್ತದೆ.

ವಿದ್ಯಾವಂತರು ಸಮಾಜ ಜೀವಿಗಳು ಈ ಕುರಿತು ಗಂಭೀರ ಯೋಚನೆ ಮಾಡಬೇಕು. ಯಾವುಇದೆ ಅರ್ಹತೆಯಿಲ್ಲದೆ ಹಣ ಬಲದಿಂದ ಸ್ಥಾನ ಗಳಿಸುವ ಎಲ್ಲರನ್ನು ನಾವು ಒಗ್ಗಟ್ಟಿನಿಂದ ದೂರ ಸರಿಸಬೇಕಾಗಿದೆ.

ಎಂಥವರನ್ನು ಆರಿಸಬೇಕೆನ್ಬುದನ್ನು ನಾವು ತಿರ್ಮಾನಿಸದೆ ಹೋದರೆ ಅದರ ಫಲವನ್ನು ಅನುಭವಿಸಬೇಕಾದವರು ನಾವು ಮಾತ್ರವಲ್ಲ ಬದಲಾಗಿ ನಮ್ಮ ಪರಂಪರೆ ಆಗಿರುತ್ತದೆ.

ನಮ್ಮ ಮಕ್ಕಳಿಗಾಗಿ ಅವರ ಉತ್ತಮ ಭವಿಷ್ಯಕ್ಕಾಗಿ ನಾವು ಎಷ್ಟೋ ಕಷ್ಟ ಪಡುತ್ತಿದ್ದೇವೆ ಇದು ಕೂಡಾ ಹಾಗೆಯೇ.

No comments:

Post a Comment